ಯೂಕಾವಾ, ಹೀಡಿಕೀ
1907-81.  ಜಪಾನಿನ ಸೈದ್ಧಾಂತಿಕ ಭೌತವಿe್ಞÁನಿ.  1907 ಜನವರಿ 23 ರಂದು ಕೀಯೋಟೊ ನಗರದಲ್ಲಿ ಜನಿಸಿದ.  ಟಕುಚಿ ಓಗಾವ ಈತನ ತಂದೆ.  ಇವನ ವಿದ್ಯಾಭ್ಯಾಸ ನಡೆದದ್ದು ಕೀಯೋಟೊ ನಗರದಲ್ಲೇ.  ಕೀಯೋಟೊ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದು (1929) ಇದೇ ವಿಶ್ವವಿದ್ಯಾಲಯದಲ್ಲಿ ಬೋಧನ ಮತ್ತು ಸಂಶೋಧನ ವೃತ್ತಿಯನ್ನು ಆರಂಭಿಸಿದ.  ತನ್ನ ಮುಂದಿನ ವ್ಯಾಸಂಗಕ್ಕಾಗಿ ಓಸಾಕ ಇಂಪೀರಿಯಲ್ ವಿಶ್ವವಿದ್ಯಾಲಯವನ್ನು ಸೇರಿದ (1933). ಅಲ್ಲಿ ಈತನಿಗೆ ಡಾಕ್ಟೊರೇಟ್ ಪದವಿ ಲಭಿಸಿತು (1938). ಅನಂತರ 1939ರಲ್ಲಿ ಈತ ಕಿಯೋಟೊ ವಿಶ್ವವಿದ್ಯಾಲಯವನ್ನು ಮತ್ತೆ ಪ್ರವೇಶಿಸಿದ.  ಪ್ರಾಧ್ಯಾಪಕನ ಹುದ್ದೆ ಸ್ವೀಕರಿಸಿದ.  ಇದೇ ಹುದ್ದೆಯಲ್ಲಿ ಈತ 1950ರ ತನಕವೂ ಮುಂದುವರಿದ.  ಇದಲ್ಲದೇ ಈತ ಪ್ರಿನ್ಸ್‍ಟನ್ ಉನ್ನತ ವ್ಯಾಸಂಗ ಸಂಸ್ಥೆಯಲ್ಲೂ ಕೊಲಂಬಿಯ ವಿಶ್ವವಿದ್ಯಾಲಯದಲ್ಲೂ ವಿಭಾಗೀಯ ಹುದ್ದೆಗಳನ್ನು ಹೊಂದಿ ಸೇವೆಗೈದ.  ಅಮೆರಿಕದಿಂದ ಹಿಂದಿರುಗಿದ ಬಳಿಕ ಈತ 1953ರಲ್ಲಿ ಕೀಯೋಟೊ ಮೂಲಭೂತ ಭೌತವಿe್ಞÁನ ಸಂಸ್ಥೆಯ ನಿರ್ದೇಶಕನಾಗಿ ನೇಮಕಗೊಂಡ. ಈ ಹುದ್ದೆಯಲ್ಲಿ 1970ರ ತನಕವೂ ಮುಂದುವರಿದ. 

ಯೂಕಾವಾಗೆ ಆಸಕ್ತಿ ಇದ್ದದ್ದು ಮೂಲಭೂತಕಣಗಳ ಅಧ್ಯಯನದಲ್ಲಿ ಆ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದ ಇವನಿಗೆ ನ್ಯೂಕ್ಲಿಯಗಳ ಸ್ಥಿರತೆಯ ಪ್ರಶ್ನೆ ಎದುರಾಯಿತು. ನ್ಯೂಕ್ಲಿಯಗಳಲ್ಲಿ ನ್ಯೂಕ್ಲಿಯಾನುಗಳನ್ನು (ನ್ಯೂಟ್ರಾನು ಮತ್ತು ಪ್ರೋಟಾನುಗಳು) ಒಟ್ಟಿಗೆ ಹಿಡಿದಿಟ್ಟಿರುವ  ಬಂಧನದ  ಬಗ್ಗೆ ಆಗ ಒಂದು ಸುಸಂಗತ ಚಿತ್ರ ಇರಲಿಲ್ಲ. ಡ್ಯೂಟೆರಾನಿನಿಂದ ಆಲ್ಫಕಣವನ್ನು ತಲುಪುವಲ್ಲಿ ಕ್ಷಿಪ್ರವಾಗಿ ಅಧಿಕಗೊಳ್ಳುವ ಬಂಧನಶಕ್ತಿಯನ್ನು  ಅರ್ಥಮಾಡಿಕೊಳ್ಳಲು ನ್ಯೂಕ್ಲಿಯ ಬಲಗಳ ವ್ಯಾಪ್ತಿ 10-13 ಸೆಂ.ಮೀ ಇರಬೇಕೆಂದು ಹಂಗರಿ ಸಂಜಾತ ಅಮೇರಿಕನ್ ಭೌತವಿe್ಞÁನಿ ಯೂಜಿನ್ ಪಾಲ್ ವಿಗ್ನರ್ ತಿಳಿಸಿದ್ದ. ನ್ಯೂಕ್ಲಿಯಾನುಗಳ  ನಡುವೆ ವಿದ್ಯುದಾವೇಶ (ಉದಾಹರಣೆಗೆ ಎಲೆಕ್ಟ್ರಾನ್) ವಿನಿಮಯ ಆಗಬೇಕೆಂದು  ಜರ್ಮನಿಯ ಭೌತವಿe್ಞÁನಿ ಕಾರ್ಲ್ ಹೈಸನ್‍ಬರ್ಗ್ (1901-76) ಸೂಚಿಸಿದ್ದ. ಹೈಡ್ರೋಜನ್ ಅಣು ಮತ್ತು ಪ್ರೋಟಾನುಗಳ ನಡುವೆ ಎಲೆಕ್ಟ್ರಾನಿನ ವಿನಿಮಯ ಆಗುವುದರಿಂದ ರಾಸಾಯನಿಕಬಂಧ ಏರ್ಪಡುವ ವಿಚಾರ ತಿಳಿದಿತ್ತು. ನ್ಯೂಕ್ಲಿಯಾ ಬಲಗಳೂ ಇದೇ ತೆರನ  ಬಲಗಳಾಗಿರಬೇಕೆಂದು ಯೂಕಾವಾ ಆಲೋಚಿಸಿದ. ನ್ಯೂಕ್ಲಿಯಗಳ ಒಟ್ಟು ಬಂಧನಶಕ್ತಿ ಅವುಗಳಲ್ಲಿರುವ ನ್ಯೂಕ್ಲಿಯಾನುಗಳ ಸಂಖ್ಯೆಗೆ ಅನುಪಾತದಲ್ಲಿರುತ್ತದೆ ಎಂಬುದನ್ನೂ ಯೂಕಾವಾ ಗಮನಿಸಿದ. ಅಂದರೆ ನ್ಯೂಕ್ಲಿಯಬಲಗಳು ಸಂತೃಪ್ತತೆಯನ್ನು ಹೊಂದಿವೆ ಎಂದ ಹಾಗಾಯಿತು. ಹಾಗಿಲ್ಲದಿದ್ದರೆ ನ್ಯೂಕ್ಲಿಯಗಳ ಒಟ್ಟುಬಂಧನ ಶಕ್ತಿ ಅವುಗಳಲ್ಲಿರುವ ನ್ಯೂಕ್ಲಿಯಾನುಗಳ ಸಂಖ್ಯೆಯ ವರ್ಗಕ್ಕೆ ಅನುಪಾತದಲ್ಲಿರುತ್ತಿತ್ತು.  ಹ್ರಸ್ವವ್ಯಾಪ್ತಿ ಮತ್ತು ಸಂತೃಪ್ತತೆಯನ್ನು ಹೊಂದಿರುವ ಬಲಗಳಿಗೆ ಕಾರಣವಾದ ಕ್ಷೇತ್ರಕ್ವಾಂಟಗಳು ನಿಶ್ಚಲರಾಶಿಯನ್ನು (ಮಾಸ್) ಹೊಂದಿರುವ ಅಗತ್ಯವನ್ನು  ಯೂಕಾವಾ ಮನಗಂಡ. ನ್ಯೂಕ್ಲಿಯಾನುಗಳಲ್ಲಿ ನಿವ್ವಳ ವಿದ್ಯುದಾವೇಶ ಇಲ್ಲದೆ ನ್ಯೂಟ್ರಾನುಗಳ ಇರುವುದರಿಂದ ನ್ಯೂಕ್ಲಿಯ ಕ್ಷೇತ್ರಕ್ವಾಂಟಗಳು ಎಲೆಕ್ಟ್ರಾನುಗಳಿಲ್ಲವೆಂದು ಈತ ತೀರ್ಮಾನಕ್ಕೆ ಬರುವಂತಾಯಿತು. ನ್ಯೂಕ್ಲಿಯ ಕ್ಷೇತ್ರಕ್ವಾಂಟಗಳಿಗೆ ಯುಕ್ತ ನಿಶ್ಚಲರಾಶಿಯನ್ನು ಒದಗಿಸಬಲ್ಲ ಮೆಸಾನ್ ಸಿದ್ಧಾಂತವನ್ನು ಈತ ಮಂಡಿಸಿದ (1935). ಆಗ ಇವನಿಗೆ ಕೇವಲ 27 ವರ್ಷಗಳಾಗಿತ್ತು.

ಮೆಸಾನ್ ಸಿದ್ಧಾಂತದ ಮೊದಲಿನ ಅಭಿಗ್ರಹಿಕೆಗಳು ಇವು : 1. ನ್ಯೂಕ್ಲಿಯ ಬಲಗಳನ್ನು ವಿವರಿಸುವ ಆದಿಶಕ್ಷೇತ್ರ ( ನಿದ್ರ್ರವ್ಯಪ್ರದೇಶದಲ್ಲಿ ಸಮೀಕರಣ (1) ನ್ನು ಪಾಲಿಸಬೇಕು.
								. . . .(1)

( =ವಿಪರ್ಯಯ ಉದ್ದದ ಆಯಾಮವನ್ನು ಹೊಂದಿರುವ ಸ್ಥಿರಾಂಕ. ಇದು ಸೊನ್ನೆಯಾದರೆ ಸಮೀಕರಣ (1) ವಿದ್ಯುತ್ಕಾಂತಕ್ಷೇತ್ರದ ಕ್ವಾಂಟವನ್ನು ವಿವರಿಸುತ್ತದೆ ಎಂಬುದು ಗಮನಾರ್ಹ ((/(ಣ =0 ಆದರೆ ಸಮೀಕರಣ (1)ರ ಪರಿಹಾರ
								.. . . (2)

ಇದು ಒಂದರಿಂದ ಇನ್ನೊಂದು ಡಿ ದೂರದಲ್ಲಿರುವ ಎರಡು ನ್ಯೂಕ್ಲಿಯಾನುಗಳ ನಡುವಿನ ಸ್ಥಾಯಿವಿಭವ g = ಸಂಯೋಜಕ ಸ್ಥಿರಾಂಕ. 

	2. ಕ್ವಾಂಟಮ್ ಸಿದ್ಧಾಂತದ ನಿಯಮಗಳ ಪ್ರಕಾರ ಕ್ಷೇತ್ರ (ಅನ್ನು ರಾಶಿಯುಕ್ತ ಕಣಗಳು ಅಥವಾ ಕ್ವಾಂಟಮ್‍ಗಳು ಸಹಚರಿಸಬೇಕು. ಅವುಗಳ ಗಿರಕಿ (ಸ್ಪಿನ್)ಸೊನ್ನೆಯಾಗಿರಬೇಕು. (=5ಘಿ1012 ಸೆಂಮೀ ಎಂದಿಟ್ಟುಕೊಂಡರೆ ಕಣಗಳ ರಾಶಿಯನ್ನು ಗಣಿಸಬಹುದು. ಇದು ಸರಿಸುಮಾರು 200me ಎನ್ನುಲಾಗಿದೆ. ಇಲ್ಲಿ me = ಎಲೆಕ್ಟ್ರಾನಿನ ನಿಶ್ಚಲರಾಶಿ. ಈ ಕಣಗಳಿಗೆ ಮೆಸಾನುಗಳು ಎಂದು ಹೆಸರು. ಈ ಹೆಸರನ್ನು ಸೂಚಿಸಿದವರು ಭಾರತದ ಭೌತವಿe್ಞÁನಿ ಹೋಮಿ ಜಹಾಂಗೀರ್ ಭಾಭಾ (1909-66).

3. ವಿನಿಮಯಗಳನ್ನು ಪಡೆಯಲು ಮೆಸಾನುಗಳಿಗೆ + e ಮತ್ತು - e ವಿದ್ಯುದಾವೇಶವನ್ನು ಆರೋಪಿಸಬೇಕು.  ಹೀಗೆ ಮಾಡಿದರೆ ಎರಡು ವಿದ್ಯುದಾವಿಷ್ಟ ಕಣಗಳು ಪ್ರೋಟಾನುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ, ಪರಸ್ಪರ ಕ್ರಿಯೆ ಎಸಗುವಂತೆ ನ್ಯೂಟ್ರಾನುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ, ಪರಸ್ಪರ ಕ್ರಿಯೆ ಎಸಗುವಂತೆ ನ್ಯೂಟ್ರಾನುಗಳು ಮೇಸಾನುಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಕ್ರಿಯೆ ಎಸಗುತ್ತವೆ.  ವಸ್ತುತಃ ನ್ಯೂಕ್ಲಿಯಾನು ಮತ್ತು ಮೆಸಾನುಕ್ಷೇತ್ರಗಳ ನುಡುವಿನ ಸಂಯೋಜಕ ಸ್ಥಿರಾಂಕ g ಯು e ಗಿಂತ ಸ್ಪಲ್ಪ ಹೆಚ್ಚು ಇರುವಂತೆ ಆರಿಸಿಕೊಂಡರೆ ಹೈಸನ್‍ಬರ್ಗ್ ಮಾದರಿಯ ಬಲವನ್ನು ಪಡೆಯುವುದು ಸಾಧ್ಯ.

4.  ಈ ಸಾಮಾನ್ಯ ಸಿದ್ಧಾಂತ ಅನೇಕ ಮಿತಿಗಳನ್ನು ಹೊಂದಿದೆ.  ಅವನ್ನು ನಿವಾರಿಸಲು ವಿದ್ಯುದಾವಿಷ್ಟ ಮೆಸಾನುಗಳ ಜೊತೆಗೆ ಅವುಗಳಷ್ಟೇ ರಾಶಿಯುಳ್ಳ ತಟಸ್ಥ ಮೆಸಾನುಗಳ ಅಸ್ತಿತ್ವವನ್ನೂ ಊಹಿಸಿಕೊಳ್ಳಬೇಕು.  ಈ ಬೆಳವಣಿಗೆಗೆ ಕಾರಣರಾದವರ ಪೈಕಿ ಕೆಮ್ಮರ್ ಕೂಡ ಒಬ್ಬ.  

5.  ಮೆಸಾನುಗಳು ನ್ಯೂಕ್ಲಿಯಾನುಗಳ ಜೊತೆ ಪರಸ್ಪರ ಕ್ರಿಯೆ ಎಸಗುವಂತೆ ಹಗುರ ಕಣಗಳೊಂದಿಗೂ ಅಂದರೆ ಎಲೆಕ್ಟ್ರಾನು ಮತ್ತು ನ್ಯೂಟ್ರಿನೊಗಳೊಂದಿಗೂ ಪರಸ್ಪರ ಕ್ರಿಯೆ ಎಸಗುತ್ತವೆ.  ಆದರೆ ಈ ಕ್ರಿಯೆಗೆ ಸಂಬಂಧಿಸಿದ ಸಂಯೋಜಕ ಸ್ಥಿರಾಂಕ g ಗಿಂತ ಬಲು ಕಡಿಮೆ.  

ಅಮೆರಿಕದ ಭೌತವಿe್ಞÁನಿಗಳಾದ ಕಾರ್ಲ್ ಡೇವಿಡ್ ಅಂಡರ್‍ಸನ್ ಮತ್ತು ನೆಡ್ಡರಾಮೆಯರ್ ಎಂಬವರು  ವಿಶ್ವಕಿರಣಗಳಲ್ಲಿ 200me ರಾಶಿಯುಳ್ಳ ಕಣಗಳನ್ನು ಪತ್ತೆಹಚ್ಚಿದರು.  (1937).  ಇದಕ್ಕೆ u - ಮೆಸಾನುಗಳೆಂದು ಹೆಸರು.  ಹೀಗಾಗಿ ಯೈಕಾವಾ ಸಿದ್ಧಾಂತಕ್ಕೆ ತಾತ್‍ಕ್ಷಣಿಕ ಬೆಂಬಲ ದೊರೆತಂತಾಯಿತು.  ಆದರೆ ಅದರಲ್ಲಿ ತೊಡಕು ಮಾತ್ರ ಇರದೆ ಇರಲಿಲ್ಲ.  u - ಮೆಸಾನುಗಳ ಜೀವಿತಾವಧಿ 2x10-6 ಸೆ. ಯೂಕಾವಾ ಮೆಸಾನುಗಳ ಜೀವಿತಾವಧಿ  10-8 ಸೆ.  ಆದ್ದರಿಂದ u - ಮೆಸಾನುಗಳು ನ್ಯೂಕ್ಲಿಯಬಲಕ್ಷೇತ್ರದ ಕ್ವಾಂಟಮ್‍ಗಳಲ್ಲವೆಂಬ ಅನುಮಾನ ಬಂತು.  ಟಾಮಿಕಾನ ಮತ್ತು ಸಕಟ ಎಂಬ ಭೌತವಿe್ಞÁನಿಗಳು u - ಮೆಸಾನುಗಳಾದರೂ ಯೂಕಾವಾ ಮೆಸಾನುಗಳು ಶಿಥಿಲಗೊಂಡು ಹುಟ್ಟಿದ ಅನುಷಂಗಿಕ ಕಣಗಳಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು. (1942)  ಅಮೆರಿಕದ ಭೌತವಿe್ಞÁನಿ ಸಿಸಿಲ್ ಫ್ರಾಂಕ್ ಪೊವೆಲ್ ಸಂಗಡಿಗರು ವಿಶ್ವಕಿರಣಗಳಲ್ಲಿ 270me  ರಾಶಿಯುಳ್ಳ ಕಣಗಳನ್ನು ಪತ್ತೆಹಚ್ಚಿದಾಗ (1947) ಈ ಅನುಮಾನಕ್ಕೆ ಉತ್ತರ ಲಭಿಸಿತು.  ಈಗ ಈ ಮೆಸಾನುಗಳಿಗೆ ಟಿ- ಮೆಸಾನುಗಳೆಂದು ಹೆಸರಿಡಲಾಗಿದೆ.  ಇವುಗಳ ಜೀವಿತಾವಧಿ 10-8 ಸೆ. ಇವು ನ್ಯೂಕ್ಲಿಯ ಕ್ಷೇತ್ರದ ಕ್ವಾಂಟಮ್‍ಗಳು.
ಯೂಕಾವಾ ಸಿದ್ಧಾಂತದ ಬೆಳವಣಿಗೆ 15 ವರ್ಷಗಳ ತನಕ ನಡೆದುಬಂತು.  ಅಮೆರಿಕದ ಭೌತವಿe್ಞÁನಿ ರಾಬರ್ಟ್ ಓಪನ್ ಹೈಮರ್‍ನ ಆಹ್ವಾನವನ್ನು ಯೂಕಾವಾ ಒಪ್ಪಿಕೊಂಡು ಪ್ರಿನ್ಸ್‍ಟನ್ನಿನ ಉನ್ನತ ಅಧ್ಯಯನ ಸಂಸ್ಥೆಗೆ ಭೇಟಿಕೊಟ್ಟ (1948).  ಅನಂತರ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ.  ಆ ಬಳಿಕ ಕೀಯೋಟೊ ವಿಶ್ವವಿದ್ಯಾಲಯಕ್ಕೆ ಹಿಂದಿರುಗಿದ.  ಈ ಕ್ಷೇತ್ರದಲ್ಲಿ ಯೂಕಾವಾ ಸಲ್ಲಿಸಿದ ಸೇವೆಗಾಗಿ ಈತನಿಗೆ 1949ರಲ್ಲಿ ನೊಬೆಲ್ ಪಾರಿತೋಷಕ ನೀಡಿ ಗೌರವಿಸಲಾಯಿತು.  ಈ ಗೌರವವನ್ನು ಪಡೆದುಕೊಂಡ ಮೊತ್ತಮೊದಲ ಜಪಾನ್ ರಾಷ್ಟ್ರೀಯ ಯೂಕಾವಾ.  ಈತ ಸುಮಿಕೊಳ ಎಂಬವಳನ್ನು ಮದುವೆಯಾದ. (1932) ಈ ದಂಪತಿಗಳಿಗೆ ಇಬ್ಬರು ಗಂಡುಮಕ್ಕಳು.  ಯೂಕಾವಾ 1981 ಸೆಪ್ಟೆಂಬರ್ 8ರಂದು ಕೀಯೋಟೊದಲ್ಲಿ ನಿಧನನಾದ.  
(ಎಸ್.ಎ.ಹೆಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ